Activities
















_____________________________

KAUSHALYAM  2015






---------------------------------------------------------------------------------------------------------------------------


ಎಸ್.ಎನ್.ಮೂಡಬಿದ್ರಿ ಪಾಲಿಟೆಕ್ನಿಕ್‌ನ ಇನ್ನೊವೇಶನ್ ಕ್ಲಬ್  ಹಾಗೂ ವಿವಿಧ ಸಂಘಗಳ ಚಟುವಟಿಕೆಗಳ ಉದ್ಘಾಟನೆ.


 ಮೂಡಬಿದ್ರೆಯ ಎಸ್. ಎನ್. ಎಂ. ಪಾಲಿಟೆಕ್ನಿಕ್ನಲ್ಲಿ ಇನ್ನೊವೇಶನ್ ಕ್ಲಬ್ ಹಾಗೂ ಇನ್ನಿತರ ಸಂಘಗಳ ಚಟುವಟಿಕೆಗಳನ್ನು ಮಂಗಳೂರಿನ ಏಸ್ ಫುಡ್ಸ್ ಪೈವೇಟ್ ಲಿಮಿಟೆಡ್ ಇದರ ನಿರ್ದೇಶಕರಾದ ಶ್ರೀ ಎಂ. ಅಣ್ಣಪ್ಪ ಪೈಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಇಂದು ಉದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ತಾಂತ್ರಿಕ ಕ್ಷೇತ್ರದಲ್ಲಿ ವಿನೂತನ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಗಳಿಸಬಹುದು ಎಂದು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಕೃಷಿ ವಿಜ್ಙಾನಿ, ಹಾಗೂ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಎಲ್. ಸಿ. ಸೋನ್ಸ್ ರವರು ವಿದ್ಯಾರ್ಥಿಗಳು ತಾವು ಗಳಿಸಿದ ತಾಂತ್ರಿಕ ಜ್ಞಾನವನ್ನು ಸ್ಥಳೀಯವಾದ ಕೃಷಿ, ತೋಟಗಾರಿ, ಆಹಾರ ಸಂಸ್ಕರಣೆ ಹಾಗೂ ಶೇಖರಣೆ ಮುಂತಾದ ಕ್ಷೇತ್ರಗಳಿಗೆ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿ ಆ ಮೂಲಕ ಶ್ರೇಷ್ಠ ಮಟ್ಟದ ಆಹಾರ ಸಾಮಾಗ್ರಿಗಳು ಕೈಗೆಟಕುವ ದರದಲ್ಲಿ ಲಭಿಸುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಕರೆಯಿತ್ತರು. ಮತ್ತೋರ್ವ ಉದ್ಯಮಿ ಶ್ರೀ ಶ್ರೀಕಾಂತ್ ಪೈಯವರು ತಾಂತ್ರಿಕ ಕ್ಷೇತ್ರದಲ್ಲಿ ವಿನೂತನ ಮಾದರಿಗಳನ್ನು ಹಾಗೂ ಮಾಹಿತಿಗಳನ್ನು ಬೆಳಕಿಗೆ ತರುವ ಸಂದರ್ಭದಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಜೆ. ಜೆ. ಪಿಂಟೊ ಸ್ವಾಗತಿಸಿದರು. ಇನ್ನೊವೇಶನ್ ಕ್ಲಬ್ಬಿನ ಸಂಚಾಲಕರಾದ ಡಾ. ಎಸ್. ಪಿ. ಗುರುದಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ಶ್ರೀ ವರುಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಶ್ರೀ ರಾಮ್ ಪ್ರಸಾದ್ ವಂದಿಸಿದರು.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Invitation of Inaugural function on 12th August 2014


No comments:

Post a Comment